ರೆಸಾರ್ಟ್‌ನಿಂದ ಬೀಗರ ಔತಣಕೂಟಕ್ಕೆ ಆಗಮಿಸಿದ್ರು ಸಿಎಂ ಕುಮಾರಸ್ವಾಮಿ - mandya_cm
ಮಡಿಕೇರಿಯ ಇಬ್ಬನಿ ರೆಸಾರ್ಟ್‌ನಲ್ಲಿ ಮೂರು ದಿನ ವಿಶ್ರಾಂತಿ ಪಡೆದ ಸಿಎಂ ನೇರವಾಗಿ ಮದ್ದೂರಿನಲ್ಲಿ ನಡೆದ ಬೀಗರ ಔತಣ ಕೂಟಕ್ಕೆ ಆಗಮಿಸಿ ವಧು-ವರನಿಗೆ ಶುಭಾಶಯ ತಿಳಿಸಿದರು. ಮದ್ದೂರು ಸಮೀಪದ ಸೋಮನಹಳ್ಳಿ ಬಳಿ ನಡೆದ ತಮ್ಮ ಆಪ್ತ ಕಾರ್ಯದರ್ಶಿ ರಘು ಕೋಣಸಾಲೆ ಅವರ ವಿವಾಹದ ಔತಣಕೂಟದಲ್ಲಿ ಪಾಲ್ಗೊಂಡರು. ಸಿಎಂಗೆ ಸಚಿವ ಡಿ.ಸಿ. ತಮ್ಮಣ್ಣ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್, ಶಾಸಕ ಸುರೇಶ್ ಗೌಡ ಸಾಥ್ ನೀಡಿದರು. ಸಿಎಂ ಆಗಮನಕ್ಕೂ ಮೊದಲೇ ಪುತ್ರ ನಿಖಿಲ್ ಆಗಮನಿಸಿ ನವ ದಂಪತಿಗೆ ಶುಭಾಶಯ ಕೋರಿದರು.
TAGGED:
mandya_cm