ಲಾಕ್ಡೌನ್ ಸಂಕಷ್ಟ: ರಾಯಚೂರಿನಲ್ಲಿ ಹೊರರಾಜ್ಯದ ಬಟ್ಟೆ ವ್ಯಾಪಾರಿಗಳ ಪರದಾಟ - ರಾಯಚೂರಿನಲ್ಲಿ ಹೊರರಾಜ್ಯದ ಬಟ್ಟೆ ವ್ಯಾಪಾರಿಗಳ ಪರದಾಟ
ಲಾಕ್ಡೌನ್ ಹಿನ್ನೆಲೆ ಉತ್ತರ ಪ್ರದೇಶದಿಂದ ಬಟ್ಟೆ ಮಾರಾಟ ಮಾಡಲು ಬಂದ 11 ಜನ ವ್ಯಾಪಾರಿಗಳು ರಾಯಚೂರು ಜಿಲ್ಲೆಯಲ್ಲಿ ಸಿಲುಕಿಕೊಂಡು ಪರದಾಡುತ್ತಿದ್ದಾರೆ. ಕಳೆದ 11 ದಿನಗಳಿಂದ ರಾಯಚೂರು ನಗರದ ಖಾಸಗಿ ಲಾಡ್ಜ್‌ನಲ್ಲಿ ಬಾಡಿಗೆ ಪಡೆದು 11 ಜನರೂ ಉಳಿದುಕೊಂಡಿದ್ರು. ಇಷ್ಟು ದಿನಗಳ ಉಳಿದಕೊಳ್ಳಲು ಹಣವಿತ್ತು. ಆದ್ರೆ ಹಣ ಖಾಲಿಯಾಗಿ, ಇರಲು ನೆಲೆಯಿಲ್ಲದೇ ಪರದಾಡುವಂತಾಗಿದೆ. ಇವರ ಜತೆಯಲ್ಲಿ ಗರ್ಭಿಣಿ ಮಹಿಳೆ ಕೂಡ ಇದ್ದು ಆಕೆಗೂ ತೊಂದರೆಯಾಗಿದೆ.