ಕರ್ನಾಟಕ

karnataka

ETV Bharat / videos

ಬ್ಯಾನರ್ ತೆರವುಗೊಳಿಸುವ ವೇಳೆ ವಿದ್ಯುತ್ ತಗುಲಿ ಪೌರಕಾರ್ಮಿಕ ಸಾವು - tumkuru dasara news

By

Published : Oct 11, 2019, 10:09 AM IST

Updated : Oct 11, 2019, 11:34 AM IST

ತುಮಕೂರು : ಬ್ಯಾನರ್ ಮತ್ತು ಬಂಟಿಂಗ್ಸ್ ಗಳನ್ನು ತೆರವುಗೊಳಿಸುವ ವೇಳೆ ವಿದ್ಯುತ್ ತಂತಿ ತಗುಲಿ ಪೌರಕಾರ್ಮಿಕರೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದಲ್ಲಿ ನಡೆದಿದೆ. ಪೌರಕಾರ್ಮಿಕ ನರಸಿಂಹ(28) ಮೃತ. ನಗರದಲ್ಲಿ ಹಾಕಲಾಗಿದ್ದ ಬ್ಯಾನರ್​ ಮತ್ತು ಬಂಟಿಂಗ್ಸ್​ಗಳನ್ನು ತೆರವುಗೊಳಿಸುತ್ತಿದ್ದ ವೇಳೆ ವಿದ್ಯುತ್​ ತಂತಿ ತಗುಲಿದ್ದು ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಆಗಮಿಸಿ ಮಾತನಾಡಿದ ಶಾಸಕ ಜ್ಯೋತಿ ಗಣೇಶ್​ ಪೌರಕಾರ್ಮಿಕನ ಸಾವಿನಿಂದ ನಮಗೂ ನೋವಾಗಿದೆ. ಮೃತನ ಕುಟುಂಬಕ್ಕೆ ಪರಿಹಾರವನ್ನು ನೀಡಲಾಗುತ್ತದೆ. ಅವರ ಕುಟುಂಬದವರಿಗೆ ಕೆಲಸ ಮತ್ತು ಮಕ್ಕಳಿಗೆ ಪದವಿವರೆಗೆ ಉಚಿತ ಶಿಕ್ಷಣ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.
Last Updated : Oct 11, 2019, 11:34 AM IST

ABOUT THE AUTHOR

...view details