COVID-19 ಸಂಕಷ್ಟದ ನಡುವೆಯೇ ಕೆಲಸ ಮಾಡುವ ಮಾಧ್ಯಮ ಮಿತ್ರರಿಗೆ ಅಭಿನಂದನೆ ಸೂಚಿಸಿದ ನಗರ ಆಯುಕ್ತರು - ಯುಗಾದಿ ಹಬ್ಬದ ಸಂಭ್ರಮ
ಬೆಂಗಳೂರು: ಕೋವಿಡ್-19 ರಾಜ್ಯದೆಲ್ಲೆಡೆ ಭೀತಿ ನಿರ್ಮಿಸುತ್ತಿದ್ದು, ಇದರ ನಡುವೆ ನಾಳೆ ಯುಗಾದಿ ಹಬ್ಬದ ಸಂಭ್ರಮ ಮರೆಯುವಂತೆ ಮಾಡಿದೆ. ಆದರೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಮಾಧ್ಯಮ ಮಿತ್ರರಿಗೆ ಯುಗಾದಿ ಹಬ್ಬದ ಶುಭಾಶಯಗಳನ್ನ ವಿಡಿಯೋ ಮೂಲಕ ತಿಳಿಸಿದ್ದಾರೆ. ಪತ್ರಿಕಾ ವಿತರಕರು, ಪತ್ರಕರ್ತರು, ಮಾಧ್ಯಮದವರು ಇತ್ತೀಚೆಗೆ ಕೋವಿಡ್-19 ಇದರ ಸಂಕ್ಷಿಪ್ತ ಸುದ್ದಿಯನ್ನ ಮನೆ ಮನೆಗೆ ಮುಟ್ಟಿಸುವಲ್ಲಿ ಬಹಳ ಜವಾಬ್ದಾರಿಯುತ ಕೆಲಸ ಮಾಡ್ತಿದ್ದಾರೆ. ಹೀಗಾಗಿ ಪೊಲೀಸ್ ಇಲಾಖೆ ಕಡೆಯಿಂದ ಏನೇ ಸಹಾಯ ಬೇಕಾದರೂ ಕೇಳಿ ನಾವು ನಿಮ್ಮ ಜೊತೆ ಇದ್ದೀವಿ ಎಂದು ವಿಡಿಯೋ ಮೂಲಕ ತಿಳಿಸಿದ್ದಾರೆ.