ಕೋವಿಡ್ ಮುನ್ನೆಚ್ಚರಿಕೆಗೆ ನೀಡಿದ ಗ್ಲೌಸ್ಗಳನ್ನ ಎಲ್ಲೆಂದರಲ್ಲಿ ಎಸೆದ ಮತದಾರರು - Citizens who throw hand gloves on the road
ಬೆಂಗಳೂರು: ಮತದಾನದ ವೇಳೆ ಕೋವಿಡ್ ಹರಡದಂತೆ ಮುನ್ನೆಚ್ಚರಿಕೆಗೆ ಕೊಟ್ಟ ಕೈ ಗ್ಲೌಸ್ಗಳು ರಸ್ತೆಗಳಲ್ಲಿ ಈಗ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಬಿಬಿಎಂಪಿಯೂ ಡಸ್ಟ್ ಬಿನ್ ವ್ಯವಸ್ಥೆ ಮಾಡದೆ ಬೇಜವಾಬ್ದಾರಿ ತೋರಿದೆ ಎಂಬ ಆರೋಪಗಳು ಕೇಳಿಬಿದ್ದಿವೆ. ಇತ್ತ ನಾಗರಿಕರೂ ಕೂಡಾ ತಮಗೆ ನೀಡಿದ ಕೈಗ್ಲೌಸ್ಗಳನ್ನ ತೆಗೆದುಕೊಂಡು ಹೋಗದೆ, ರಸ್ತೆಗಳಲ್ಲಿ, ಪಾದಚಾರಿ ಮಾರ್ಗಗಳಲ್ಲಿ ಎಸೆದು ಹೋಗುತ್ತಿದ್ದಾರೆ. ಪರಿಸರ ಮಾಲಿನ್ಯ ಒಂದು ಕಡೆ ಆದರೆ, ಇನ್ನೊಂದೆಡೆ ಕೋವಿಡ್ ಭೀತಿ ಕೂಡ ಹೆಚ್ಚಲಿದೆ.