ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಗೌರಿಬಿದನೂರಿನಲ್ಲಿ ಬೃಹತ್ ಮೆರವಣಿಗೆ - Citizen amendment act awareness rally
ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ತಾಲೂಕಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಬೆಂಬಲಿಸಿ ವಿವಿಧ ಸಂಘ ಸಂಸ್ಥೆಗಳು ಬೃಹತ್ ಮೆರವಣಿಗೆ ನಡೆಸಿದವು. ಹಿಂದೂಪುರ-ಬೆಂಗಳೂರು ರಸ್ತೆಯಲ್ಲಿರುವ ನಾಗಪ್ಪ ಬ್ಲಾಕ್ನಿಂದ ಮೆರವಣಿಗೆಗೆ ಚಾಲನೆ ನೀಡಲಾಯಿತು. ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಮಿತಿ ಸದಸ್ಯ ಎನ್.ಎಂ.ರವಿನಾರೆಡ್ಡಿ, ಮಾಜಿ ಶಾಸಕಿ ಎನ್.ಜ್ಯೋತಿರೆಡ್ಡಿ, ಪಕ್ಷದ ಕಾರ್ಯಕರ್ತರು, ಆರ್ಎಸ್ಎಸ್ ಮುಖಂಡರು, ವಿಶ್ವ ಹಿಂದೂ ಪರಿಷತ್, ಎಬಿವಿಪಿ ಆರ್ಯ ವೈಶ್ಯ ಮಂಡಳಿ ಕಾರ್ಯಕರ್ತರು ಪಾಲ್ಗೊಂಡಿದ್ದರು. ಸಭೆಗೆ ಶಾಸಕ ಕೆ.ಸುಧಾಕರ್ ಆಗಮಿಸಿದ್ದರು.