ಶಿವರಾಮಣ್ಣನ ನಿಧನ ಕನ್ನಡ ಚಿತ್ರರಂಗಕ್ಕೆ ದೊಡ್ಡ ನಷ್ಟ: ಗಣ್ಯರ ಕಂಬನಿ - ಶಿವರಾಂ ಕುರಿತು ನಿರ್ದೇಶಕ ಟಿ ಎನ್ ಸೀತಾರಾಮ್ ಹೇಳಿಕೆ
ಬೆಂಗಳೂರು: ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರಕ್ಕೆ ನಿರ್ದೇಶಕ ಟಿ.ಎನ್.ಸೀತಾರಾಮ್, ನಟಿ ಸುಧಾರಾಣಿ, ನಟ ರಾಮಕೃಷ್ಣ, ನಿರ್ಮಾಪಕ ಕೆ.ಮಂಜು ಹಾಗು ಬ್ರಹ್ಮಾಂಡ ಗುರೂಜಿ ಆಗಮಿಸಿ, ಶಿವರಾಂ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು, ಮಾಧ್ಯಮದ ಜೊತೆ ಮಾತನಾಡಿದರು. ಶಿವರಾಂ ನಿಧನ ಕನ್ನಡ ಚಿತ್ರರಂಗಕ್ಕಾದ ದೊಡ್ಡ ನಷ್ಟ ಎಂದು ಕಂಬನಿ ಮಿಡಿದರು.