ಕರ್ನಾಟಕ

karnataka

ETV Bharat / videos

ಹಾಸನದ ಸಂತ ಅಂತೋನಿ ಚರ್ಚ್​ನಲ್ಲಿ ಅದ್ಧೂರಿ ಕ್ರಿಸ್​ಮಸ್​​ ಆಚರಣೆ! - hasan latest news

By

Published : Dec 25, 2019, 11:40 PM IST

ಪ್ರತೀ ವರ್ಷದಂತೆ ಈ ವರ್ಷವೂ ಹಾಸನದ ವಿವಿಧ ಚರ್ಚ್‌ಗಳಲ್ಲಿ ಕ್ರಿಸ್​ಮಸ್​​ ಸಂಭ್ರಮವನ್ನು ಅದ್ಧೂರಿಯಾಗಿ ಆಚರಿಸಲಾಯಿತು.ನಗರದ ಎನ್.ಆರ್ ವೃತ್ತದಲ್ಲಿರುವ ಸಂತ ಅಂತೋನಿ ಚರ್ಚ್​​​ಗೆ ಮಕ್ಕಳು ಮತ್ತು ದೊಡ್ಡವರು ತೆರಳಿ ಯೇಸು ಇರುವ ಜಾಗದ ಮುಂದೆ ಮೇಣದ ಬತ್ತಿ ಇಟ್ಟು ಪ್ರಾರ್ಥಿಸಿದರು. ಚರ್ಚ್​ ಪಾಧರ್ ರೊನಾಲ್ಡ್ ಮಾತನಾಡಿ, ವರ್ಷದ ಕೊನೆ ತಿಂಗಳಾದ ಡಿಸೆಂಬರ್ ತಿಂಗಳಲ್ಲಿ ಬರುವ ಕ್ರಿಸ್​​ಮಸ್​​ ಎಂಬುದು ಯೇಸುವಿನ ಜನನದ ಹಬ್ಬ. ಪ್ರತೀ ವರ್ಷವೂ ಬಹಳ ಹರ್ಷದಿಂದ, ಪ್ರೀತಿಯಿಂದ ಯಾವುದೇ ಮತಬೇಧವಿಲ್ಲದೇ ಎಲ್ಲರೂ ಕೂಡ ಆಚರಿಸುವ ಹಬ್ಬವಾಗಿದೆ ಎಂದರು. ಇನ್ನೂ ಸಂತ ಅಂತೋನಿಯವರ ದೇವಾಲಯದಲ್ಲಿ ರಾತ್ರಿಯಿಂದಲೇ ಭಜನೆ ಗೀತೆಗಳ ಮೂಲಕ ಕಾರ್ಯಕ್ರಮ ಪ್ರಾರಂಭವಾಗಿದ್ದು, ಸುಮಾರು ಎರಡುವರೆ ಸಾವಿರ ಜನರು ಇದರಲ್ಲಿ ಭಾಗವಹಿಸಿದ್ದರು.

ABOUT THE AUTHOR

...view details