ಮೈ ಜುಮ್ಮೆನಿಸೋ ಮುಳ್ಳಿನ ಜಾತ್ರೆ: ಇದು ಕೋಟೆ ನಾಡಿನ ವಿಶೇಷ..! - ಚಿತ್ರದುರ್ಗ ಮುಳ್ಳಿನ ಜಾತ್ರೆ
ಇದು ಮುಳ್ಳಿನಿಂದಲೇ ಕಟ್ಟಿದ ತಾತ್ಕಾಲಿಕ ದೇವಸ್ಥಾನ. ಜಾತ್ರೆಯ ಆರಂಭದಲ್ಲಿ ಕಟ್ಟುವ ಆ ಮುಳ್ಳಿನ ದೇವಸ್ಥಾನದ ಮೇಲೆ ವೀರಗಾರರು ಅರೆಬೆತ್ತಲೆಯಾಗಿ ಬರಿಗಾಲಿನಲ್ಲಿ ಹತ್ತಿ ಕಲಶವನ್ನು ಕೀಳೋ ಮೂಲಕ ಆ ಊರಿನ ಮುಳ್ಳಿನ ಜಾತ್ರೆಗೆ ತೆರೆ ಬೀಳುತ್ತೆ. ಇಂತಹ ಒಂದು ವಿಚಿತ್ರ ಬುಡಕಟ್ಟು ಆಚರಣೆ ಇಂದಿಗೂ ಜೀವಂತವಾಗಿದ್ದು ಈ ಜಾತ್ರೆಗೆ ಕೋಟೆ ನಾಡು ಸಾಕ್ಷಿಯಾಗಿದೆ.