ಲಾಕ್ಡೌನ್ಗೆ ಡೋಂಟ್ ಕೇರ್: ಬೀದಿ ಬೀದಿಯಲ್ಲಿ ತಿರುಗಾಟಕ್ಕೆ ಜೈ - ಯುಗಾದಿ ಸಂಭ್ರಮದ ಹಿನ್ನೆಲೆ ಹೂವು, ಬಾಳೆ ಎಲೆ, ಮಾವಿನಸೊಪ್ಪು ಖರೀದಿಗೆ ಮುಗಿಬಿದ್ದ ಜನರ ನ್ಯೂಸ್
ಚಿತ್ರದುರ್ಗ: ಪ್ರಧಾನಿ ಮೋದಿಯವರು ದೇಶಾದ್ಯಂತ ಲಾಕ್ಡೌನ್ ಘೋಷಣೆ ಮಾಡಿದ್ರು ಕೂಡ ಚಿತ್ರದುರ್ಗದ ಜನ ಡೋಂಟ್ ಕೇರ್ ಎಂದು ಬೀದಿ ಸುತ್ತುತ್ತಿದ್ದಾರೆ. ಅಲ್ಲಲ್ಲಿ ಜನರು ಸೇರುತ್ತಿರುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ. ನಗರಾದ್ಯಂತ ಆಟೋ ಸಂಚಾರ, ಬಸ್ ಸಂಪೂರ್ಣ ಸ್ತಬ್ಧವಾಗಿದ್ದು, ಯುಗಾದಿ ಸಂಭ್ರಮದ ಹಿನ್ನೆಲೆ ಹೂವು, ಬಾಳೆ ಎಲೆ, ಮಾವಿನಸೊಪ್ಪು ಖರೀದಿಗೆ ಜನ್ರು ಮುಗಿ ಬಿದ್ದಿದ್ರು. ಇದನ್ನು ತಿಳಿದ ಪೊಲೀಸರು ಜನರನ್ನು ಜಾಗ ಖಾಲಿ ಮಾಡಿಸಿದರು.