ಕರ್ನಾಟಕ

karnataka

ETV Bharat / videos

ಘಟಪ್ರಭೆಯ ರೌದ್ರಾವತಾರಕ್ಕೆ ಮುಳುಗಿದ ಚಿಂಚಖಂಡಿ ಸೇತುವೆ... ಶಾಸಕ ಗೋವಿಂದ ಕಾರಜೋಳ ಭೇಟಿ - ಚಿಂಚಖಂಡಿ ಸೇತುವೆ

By

Published : Aug 8, 2019, 1:34 PM IST

Updated : Aug 8, 2019, 2:20 PM IST

ಬಾಗಲಕೋಟೆ: ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿದ್ದು, ಜಿಲ್ಲೆಯ ಘಟಪ್ರಭಾ ನದಿಗೆ 2 ಲಕ್ಷ ಕ್ಯೂಸೆಕ್​ಗೂ ಅಧಿಕ ನೀರು ಹರಿದು ಬರುತ್ತಿದೆ. ಪರಿಣಾಮ ಪ್ರವಾಹ ಉಂಟಾಗಿದೆ. ಮುಧೋಳ ತಾಲೂಕಿನಲ್ಲಿ ಸುಮಾರು 19 ಗ್ರಾಮಗಳು ಮುಳುಗಡೆಗೊಂಡಿವೆ. ವಿಜಯಪುರ-ಧಾರವಾಡ-ಬೆಳಗಾವಿ ರಾಜ್ಯ ಹೆದ್ದಾರಿಗೆ ಸಂಚಾರ ಕಲ್ಪಿಸುವ ಚಿಂಚಖಂಡಿ ಸೇತುವೆ ಸಂಪೂರ್ಣ ಮುಳುಗಡೆಗೊಂಡು ಸಂಪರ್ಕ ಕಡಿತವಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಸ್ಥಳೀಯ ಶಾಸಕರಾದ ಗೋವಿಂದ ಕಾರಜೋಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶಾಸಕರು ಈಟಿವಿ ಭಾರತ್​ನೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.
Last Updated : Aug 8, 2019, 2:20 PM IST

ABOUT THE AUTHOR

...view details