ನಾಲ್ವರು ಮಕ್ಕಳಿದ್ದರೂ ಬೀದಿಗೆ ಬಿದ್ದಿದ್ದ ತಾಯಿ!
ಬೆಂಗಳೂರು: ಗೌರಮ್ಮ ಎಂಬ ಮಹಿಳೆ ಇಲ್ಲಿನ ಇಂದಿರಾನಗರದಲ್ಲಿ ವಾಸವಿದ್ದಾರೆ. ಇವರಿಗೆ ನಾಲ್ವರು ಮಕ್ಕಳಿದ್ದರೂ ಬೀದಿ ಬದಿಯಲ್ಲಿ ಜೀವನ ಸಾಗಿಸುವಂತಾಗಿತ್ತು. ಓರ್ವ ಮಗಳು ವಿದ್ಯಾಭ್ಯಾಸ ಪಡೆದು ಗಂಡನ ಜೊತೆ ಇದ್ದರೆ, ಮತ್ತೋರ್ವಳು ಇಂಜಿನಿಯರ್ ಆಗಿದ್ದಾಳೆ. ಹಾಗೆಯೇ ಮಗ ಜಡ್ಜ್ ಆಗಿದ್ದರೆ, ಮತ್ತೋರ್ವ ಇಂಜಿನಿಯರ್ ಇದ್ದಾನೆ. ಇಷ್ಟೆಲ್ಲ ಇದ್ದರೂ ಗೌರಮ್ಮಳನ್ನು ನೋಡಿಕೊಳ್ಳಲು ಯಾರೂ ಕೂಡ ಇರಲಿಲ್ಲ.