ಮಕ್ಕಳ ಕುಣಿತಕ್ಕೆ ಸಿದ್ದರಾಮಯ್ಯ ಫುಲ್ ಫಿದಾ... ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಮಾಜಿ ಸಿಎಂ! - latest mysore news
ಮೈಸೂರಿನ ಸಿದ್ದರಾಮನ ಹುಂಡಿಗೆ ಇಂದು ಭೇಟಿ ನೀಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಮಕ್ಕಳ ಕುಣಿತ ಬಹುವಾಗಿ ಆಕರ್ಷಿಸಿತು. ಗ್ರಾಮದ ದೇವಾಲಯಕ್ಕೆ ಭೇಟಿ ನೀಡಿದಾಗ ಪಕ್ಕದಲ್ಲೇ ಮಕ್ಕಳು ಕುಣಿತ ಅಭ್ಯಾಸ ಮಾಡುತ್ತಿದ್ದರು. ತಾಳ-ಮೇಳದ ಸದ್ದು ಕೇಳಿದ ಮಾಜಿ ಸಿಎಂ ಏನದು ಎಂದು ಗ್ರಾಮಸ್ಥರನ್ನು ಕೇಳಿದರು. ಮಕ್ಕಳು ಕುಣಿತ ಅಭ್ಯಾಸ ಮಾಡುತ್ತಿರುವುದನ್ನು ತಿಳಿದು ನೇರವಾಗಿ ಅಲ್ಲಿಗೆ ತೆರಳಿದರು. ಹತ್ತು ನಿಮಿಷ ಕುಣಿತ ನೋಡಿ ಮಕ್ಕಳ ಬೆನ್ನು ತಟ್ಟಿ ಪ್ರೋತ್ಸಾಹಿಸಿದರು. ಬಾಲ್ಯದಲ್ಲಿ ಕುಣಿತ ಅಭ್ಯಾಸ ಮಾಡುತ್ತಿದ್ದುದನ್ನು ನೆನಪಿಸಿಕೊಂಡರು. ಇದೇ ವೇಳೆ ಅಂದಿನ ಸಹಪಾಠಿಗಳೊಂದಿಗೆ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.