ಕರ್ನಾಟಕ

karnataka

ETV Bharat / videos

ಹೊರಗುತ್ತಿಗೆ ಪದ್ಧತಿ ವಿರುದ್ಧ ಮಕ್ಕಳ ರಕ್ಷಣಾ ಘಟಕ ಗುತ್ತಿಗೆ ನೌಕರರ ಪ್ರತಿಭಟನೆ - Child Protection union

By

Published : Dec 11, 2020, 1:55 PM IST

ಬೆಂಗಳೂರು: ಬಾಲ್ಯವಿವಾಹ ತಡೆಯುವ, ಬಾಲಕಾರ್ಮಿಕ ಪದ್ಧತಿ, ಮಕ್ಕಳ ಶೋಷಣೆ ತಡೆದು ಅನಾಥ ಮಕ್ಕಳನ್ನು ರಕ್ಷಿಸುವ ರಕ್ಷಣಾ ಘಟಕದ ಗುತ್ತಿಗೆ ನೌಕರರ ಕೆಲಸಕ್ಕೆ ಇದೀಗ ರಕ್ಷಣೆ ಇಲ್ಲವಾಗಿದೆ. ಕೆಲಸ ಖಾಯಮಾತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಗುತ್ತಿಗೆ ನೌಕರರು ರಸ್ತೆಗಿಳಿದಿದ್ದಾರೆ. ರಾಜ್ಯದ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ವೇತನ ಹೆಚ್ಚಳ, ಹೊರಗುತ್ತಿಗೆ ಪದ್ಧತಿಯ ರದ್ಧತಿ, ಸೇವಾಭದ್ರತೆ, ಖಾಯಮಾತಿ ಹಾಗೂ ಇತರ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಗುತ್ತಿಗೆ ನೌಕರರ ಸಂಘದಿಂದ ನಗರದ ಫ್ರೀಡಂ ಪಾರ್ಕ್​ನಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಒಂದೇ ಇಲಾಖೆಯಲ್ಲಿ ಬೇರೆ ಯೋಜನೆಯಡಿ ಕೆಲಸ ಮಾಡುವವರಿಗೆ ಒಂದು ವೇತನ, ಗುತ್ತಿಗೆ ನೌಕರರಿಗೆ ಒಂದು ವೇತನ ಕೊಡುವ ಮೂಲಕ ತಾರತಮ್ಯ ಮಾಡಲಾಗ್ತಿದೆ. 2015 ರಿಂದಲೂ ವೇತನ ಹೆಚ್ಚಳವಾಗಿಲ್ಲ. ಹೊರಗುತ್ತಿಗೆ ಪದ್ಧತಿಯಲ್ಲಿ ಸಾಕಷ್ಟು ಕಿರುಕುಳವಾಗ್ತಿದೆ ಎಂದು ನೌಕರರು ಅಳಲು ತೋಡಿಕೊಂಡರು. ಈ ಬಗ್ಗೆ ನಮ್ಮ ಪ್ರತಿನಿಧಿ ಸೌಮ್ಯಶ್ರೀ ವಿವರ ನೀಡಿದ್ದಾರೆ.

ABOUT THE AUTHOR

...view details