ಮಲೆನಾಡಿನಲ್ಲಿ ಮತ್ತೆ ಅಬ್ಬರಿಸಿದ ವರುಣ.. ಆತಂಕದಲ್ಲಿ ಕಾಫಿನಾಡಿನ ಜನ - ಚಿಕ್ಕಮಗಳೂರಿನಲ್ಲಿ ಧಾರಾಕಾರ ಮಳೆ
ಮಲೆನಾಡಲ್ಲಿ ಮತ್ತೆ ವರುಣನ ಅಬ್ಬರ ಜೋರಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೊರನಾಡು ಸುತ್ತಮುತ್ತ ಎಳ್ಳಕುಂಬ್ರಿ,ಬಲಿಗೆ, ಚಿಕ್ಕನಕೂಡಿಗೆ, ಕವನಹಳ್ಳ ಗ್ರಾಮದಲ್ಲಿ ರಣ ಮಳೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ನೀರು ಮನೆಗಳಿಗೆ ನುಗ್ಗುತ್ತಿದೆ. ಕಾಫಿ, ಅಡಿಕೆ, ಗದ್ದೆಗಳೂ ಸಂಪೂರ್ಣ ಜಲಾವೃತವಾಗಿವೆ. ಹೊರನಾಡಿನಿಂದ ಹೊಸಮನೆಗೆ ಹೋಗುವ ಮಿನಿ ಸೇತುವೆ ಸಂಪರ್ಕ ಕಡಿತ ಆಗಿದ್ದು, ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿನ ಜನರು ಮತ್ತೆ ಈ ಮಳೆಯಿಂದ ಆತಂಕದಲ್ಲಿದಾರೆ. ಜಿಲ್ಲೆಯ ಮೂಡಿಗೆರೆ ತಾಲೂಕಿನ ಗಡಿ ಭಾಗದ ಹಾನುಭಾಳ್ ಹಾಗೂ ಅವಕಾಡನ ರಸ್ತೆಯಲ್ಲಿ ಬರುವ ಕೆರೆ ತುಂಬಿದ್ದು ಕೋಡಿ ಬಿದ್ದಿದೆ. ನೀರು ರಸ್ತೆಯ ಒಳಗಿಂದ ಹರಿಯುತ್ತಿದ್ದು ಜನರಲ್ಲಿ ಮತ್ತೆ ಆತಂಕ ಸೃಷ್ಟಿಸಿದೆ.