ವಿದ್ಯಾರ್ಥಿನಿ ಅತ್ಯಾಚಾರ, ಕೊಲೆಗೈದವರಿಗೆ ಗಲ್ಲು.. ಈಟಿವಿಗೆ ವಕೀಲರ ಪ್ರತಿಕ್ರಿಯೆ! - ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದ ನ್ಯಾಯಾಲಯ
ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿಯಲ್ಲಿ 2016ರ ಫೆ.16ರಂದು ಕಾಲೇಜು ಮುಗಿಸಿ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿನಿಯನ್ನ ಅಪಹರಿಸಿ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದ ಇಬ್ಬರು ಆರೋಪಿಗಳಾದ ಸಂತೋಷ್ ಹಾಗೂ ಪ್ರದೀಪ್‌ಗೆ ಜಿಲ್ಲಾ ಸತ್ರ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ. ವಿದ್ಯಾರ್ಥಿನಿ ಪರ ಸರ್ಕಾರಿ ಅಭಿಯೋಜಕ ಯಲಗೇರಿ ಅವರು ವಾದ ಮಂಡಿಸಿದ್ದರು. ಈ ಕೇಸ್‌ನ ಕುರಿತಂತೆ 'ಈಟಿವಿ ಭಾರತ'ದೊಂದಿಗೆ ಅವರು ಮಾತನಾಡಿದ್ದಾರೆ.