ಚಿಕ್ಕಮಗಳೂರು ಜಿಲ್ಲಾ ಉತ್ಸವಕ್ಕೆ ಕ್ಷಣ ಗಣನೆ... ದೀಪಾಲಂಕಾರದಲ್ಲಿ ಝಗ ಮಗಿಸುತ್ತಿದೆ ನಗರ - Chikmagalur District Festival
ಚಿಕ್ಕಮಗಳೂರು: ಜಿಲ್ಲಾ ಉತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಉತ್ಸವದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದ್ದು, ಸದ್ಯ ಚಿಕ್ಕಮಗಳೂರು ನಗರ ನಿಧಾನವಾಗಿ ಶೃಂಗಾರಗೊಳ್ಳುತ್ತಿದೆ. ದೀಪಾಲಂಕಾರದಲ್ಲಿ ಝಗಮಗಿಸಲು ಕಾತುರದಿಂದ ಕಾಯುತ್ತಿದೆ. 20 ವರ್ಷದ ನಂತರ ಜಿಲ್ಲಾ ಉತ್ಸವ ನಡೆಯುತ್ತಿದ್ದು, ಇದೇ ತಿಂಗಳು 27ರಿಂದ 1ರವರೆಗೂ ವಿವಿಧ ಕಾರ್ಯಕ್ರಮಗಳು ನಗರದಲ್ಲಿ ಆಯೋಜನೆಗೊಳ್ಳಲಿದೆ.