ಲಾಕ್ಡೌನ್ ಜಾರಿಯಲ್ಲಿದ್ದರೂ ಕ್ಯಾರೆ ಎನ್ನದ ಚಿಕ್ಕೋಡಿ ಜನ - Infected with chikodi corona
ರಾಜ್ಯದಲ್ಲಿ ಭಾನುವಾರದ ಲಾಕ್ಡೌನ್ ಜಾರಿಯಲ್ಲಿದ್ದರೂ ಸಹ ಜನ ಕ್ಯಾರೇ ಎನ್ನದೆ ಬೇಕಾಬಿಟ್ಟಿ ಅಲೆದಾಡುತ್ತಿದ್ದಾರೆ. ಇನ್ನೂ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ ಏರುತ್ತಲೇ ಇದ್ದರೂ ಜನ ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಮಾಸ್ಕ್ ಸಹಿತ ಧರಿಸದೆ ತಿರುಗಾಡುತ್ತಿದ್ದಾರೆ. ಇನ್ನೂ ಸ್ಥಳೀಯ ಅಧಿಕಾರಿಗಳು, ಪೊಲೀಸ್ ಇಲಾಖೆ ಕೂಡಾ ಬಸವೇಶ್ವರ ವೃತ್ತದಲ್ಲಿ ಇಲ್ಲದಿರುವುದರಿಂದ ಜನರು ಬೇಜವಾಬ್ದಾರಿಯಿಂದ ವರ್ತಿಸುತ್ತಿರುವುದು ಕಂಡು ಬಂದಿದೆ.