ತಗ್ಗಿದ ಮಳೆ: ಚಿಕ್ಕೋಡಿ ಉಪ ವಿಭಾಗದ ಎಲ್ಲಾ ಸೇತುವೆಗಳು ಸಂಚಾರಕ್ಕೆ ಮುಕ್ತ
ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಹಾಗೂ ಚಿಕ್ಕೋಡಿ ಉಪ ವಿಭಾಗದಲ್ಲಿ ಮಳೆಯ ಪ್ರಮಾಣ ತಗ್ಗಿದೆ. ಹೀಗಾಗಿ ಕೃಷ್ಣಾ ನದಿಯ ಒಳಹರಿವು ಕಡಿಮೆಯಾದ ಪರಿಣಾಮ ಚಿಕ್ಕೋಡಿ ಉಪ ವಿಭಾಗದ ಎಲ್ಲಾ ಸೇತುವೆಗಳು ಸಂಚಾರಕ್ಕೆ ಮುಕ್ತವಾಗಿವೆ. ಕೃಷ್ಣಾ ನದಿಗೆ ಅಡ್ಡಲಾಗಿರುವ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಲ್ಲೋಳ - ಯಡೂರ ಸೇತುವೆ ಹಾಗೂ ರಾಯಬಾಗ ತಾಲೂಕಿನ ಕುಡಚಿ - ಉಗಾರ ಸೇತುವೆ, ನಿಪ್ಪಾಣಿ ತಾಲೂಕಿನ ವೇಸಗಂಗಾ ನದಿಗೆ ಅಡ್ಡಲಾಗಿರುವ ಸಿದ್ನಾಳ - ಅಕ್ಕೋಳ, ಭೋಜ - ಹುನ್ನರಗಿ, ಭೋಜವಾಡಿ - ಕುನ್ನೂರ ಮತ್ತು ಜತ್ರಾಟ ಭೀಮಸಿ ಹಾಗೂ ದೂಧಗಂಗಾ ನದಿಗೆ ಅಡ್ಡಲಾಗಿರುವ ಮಲಿಕವಾಡ - ದತ್ತವಾಡ, ಕಾರದಗಾ - ಭೋಜ ಸೇತುವೆಗಳು ಸಂಚಾರಕ್ಕೆ ಮುಕ್ತವಾಗಿವೆ.