ರೇಪಿಸ್ಟ್‌ಗಳ ಸಾವನ್ನ ಸಂಭ್ರಮಿಸಲ್ಲ..ಆದರೆ, ಮಗಳ ಆತ್ಮಕ್ಕೆ ಶಾಂತಿ ಸಿಕ್ಕ ತೃಪ್ತಿ.. ಎಂಥಾ ಮಾತಿದು! - ಚಿಕ್ಕಮಗಳೂರು ನ್ಯಾಯಾಲಯ
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ 2016ರ ಫೆಬ್ರವರಿ 16 ರಂದು ಕಾಲೇಜು ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಸ್ವಾತಿ ಎಂಬ ವಿದ್ಯಾರ್ಥಿನಿಯನ್ನು ಅಪಹರಿಸಿ ಅತ್ಯಾಚಾರ ಹಾಗೂ ಕೊಲೆ ಮಾಡಿದ್ದ ಇಬ್ಬರು ಆರೋಪಿಗಳಾದ ಸಂತೋಷ್ ಹಾಗೂ ಪ್ರದೀಪ್‌ಗೆ ಚಿಕ್ಕಮಗಳೂರು ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಈ ತೀರ್ಪಿನ ಕುರಿತು ಮೃತ ಸ್ವಾತಿ ತಂದೆ ತ್ಯಾಗರಾಜ್ ಅವರ ಜೊತೆ ಈಟಿವಿ ಭಾರತ್ ಪ್ರತಿನಿಧಿ ಚಿಟ್‌ಚಾಟ್ ನಡೆಸಿದ್ದಾರೆ.