ಸಿಎಂ ಬಿಎಸ್ವೈ ಸೂಕ್ತ ಸಮಯದಲ್ಲಿ, ಸೂಕ್ತವಾದ ಸಚಿವ ಸ್ಥಾನ ನೀಡ್ತಾರೆ: ಡಾ. ಸುಧಾಕರ್ ವಿಶ್ವಾಸ - ದೇಶದಲ್ಲಿನ ವಿದ್ಯಮಾನಗಳಿಂದಾಗಿ ಸಂಪುಟ ವಿಸ್ತರಣೆ ಸಮಯ ನಿಗದಿಯಾಗಿಲ್ಲ
ಬೆಂಗಳೂರು: ನೂತನ ಶಾಸಕನಾಗಿ ಇಂದು ಪ್ರಮಾಣವಚನ ಸ್ವೀಕರಿಸಿದ್ರದೇನೆ. ದೇಶದಲ್ಲಿ ನಡೆಯುತ್ತಿರುವ ಒಂದಷ್ಡು ವಿದ್ಯಮಾನಗಳಿಂದಾಗಿ ಸಂಪುಟ ವಿಸ್ತರಣೆ ಸಮಯ ನಿಗದಿಯಾಗಿಲ್ಲ. ಆದಷ್ಟು ಬೇಗ ಸಂಪುಟ ವಿಸ್ತರಣೆ ಆಗಲಿದೆ. ಮುಖ್ಯಮಂತ್ರಿ ಯಡಿಯೂರಪ್ಪ ನನಗೆ ಸಚಿವ ಸ್ಥಾನ ನೀಡಲಿದ್ದಾರೆ ಎಂದು ಚಿಕ್ಕಬಳ್ಳಾಪುರದ ನೂತನ ಶಾಸಕ ಡಾ. ಸುಧಾಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.