ಬೆಂಗಳೂರಿನ ಪೇಜಾವರ ಮಠಕ್ಕೆ ಸಿಎಂ ಬಿಎಸ್ವೈ ಭೇಟಿ - Chief Minister Yeddyurappa visit to Pejavara Math at Bangalore
ವಿಶ್ವೇಶತೀರ್ಥ ಸ್ವಾಮೀಜಿಗಳು ಪೀಠಾರೋಹಣ ಮಾಡಿ ಇಂದಿಗೆ 82 ವರ್ಷವಾದ ಹಿನ್ನೆಲೆ ಪೇಜಾವರ ಮಠಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೇಟಿ ನೀಡಿದರು. ಬೆಂಗಳೂರಿನ ವಿದ್ಯಾಪೀಠದ ಪೂರ್ಣಪ್ರಜ್ಞ ಮಠದಲ್ಲಿ ಸಂಸ್ಮರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ನಮಸ್ಕರಿಸಿದರು. ಕಾರ್ಯಕ್ರಮಕ್ಕೂ ಮುನ್ನ ಪೇಜಾವರ ಶ್ರೀಗಳ ಬೃಂದಾವನಕ್ಕೆ ನಮಸ್ಕರಿಸಿದರು. ಮಾಧ್ಯಮಗಳೊಂದಿಗೆ ಕರ್ಫ್ಯೂ ವಾಪಸ್ ಪಡೆದಿರುವ ವಿಚಾರದ ಬಗ್ಗೆ ಮಾತನಾಡಲು ನಿರಾಕರಿಸಿದರು.