ಕೊರೊನಾ ತಡೆಗಟ್ಟಲು ರಾಯಚೂರಿನಲ್ಲಿ ರಾಸಾಯನಿಕ ಸಿಂಪಡಣೆ - Chemical spray at Raichur to prevent corona
ರಾಯಚೂರು: ಕೊರೊನಾ ಸೋಂಕಿನ ಭೀತಿ ಹಿನ್ನೆಲೆ ನಗರದಲ್ಲಿ ರಾಸಾಯನಿಕ ಸಿಂಪಡಣೆ ಮಾಡಲಾಯಿತು. ನಗರದ ತರಕಾರಿ ಮಾರುಕಟ್ಟೆ, ತೀನ್ ಕಂದಿಲ್ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಅಗ್ನಿಶಾಮಕ ವಾಹನದ ಮೂಲಕ ರಾಸಾಯನಿಕ ಸಿಂಪಡನೆ ಮಾಡಿದ್ರು. ಲಾಕ್ ಡೌನ್‌ನಿಂದಾಗಿ ರಾಯಚೂರು ಸ್ಥಬ್ಧವಾಗಿದೆ ಅಂಗಡಿ-ಮುಗಟ್ಟುಗಳನ್ನ ಬಂದ್‌ಗೊಳಿಸಿ, ಜನರ ಓಡಾಟದಿಂದಾಗಿ ನಿರ್ಬಂಧ ಹೇರಲಾಗಿದೆ. ಇದರಿಂದ ರಸ್ತೆಗಳು, ಮಾರುಕಟ್ಟೆಗಳು, ಖಾಲಿ ಖಾಲಿಯಾಗಿವೆ.