ಗಣಿನಾಡಿನ ಜನರ ನಿದ್ದೆ ಕೆಡಿಸಿದ್ದ ಚಿರತೆ: ಕೊನೆಗೂ ಬಿತ್ತು ಬೋನಿಗೆ - ಚಿತ್ರದುರ್ಗ ಲಾಕ್ಡೌನ್
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದ ಜನರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಸೆರೆಯಾಗಿದೆ. ಕಲ್ಲೊಡ್ ಮೊಹಲ್ಲಾ ಬಳಿ ನಿನ್ನೆ ರಾತ್ರಿ ವೇಳೆ ಚಿರತೆ ಬೋನಿಗೆ ಬಿದ್ದಿದೆ. ಹಲವು ದಿನದಿಂದ ಕೂಗಳತೆಯಲ್ಲಿದ್ದ ಗುಡ್ಡದಲ್ಲಿ ಕಾಣಿಸಿಕೊಳ್ಳುತ್ತಿದ್ದ ಚಿರತೆ ಸೆರೆಗೆ ಬೋನ್ ಇರಿಸಲಾಗಿತ್ತು. ಇದೀಗ ಚಿರತೆ ಸೆರೆ ಸಿಕ್ಕಿದ್ದರಿಂದ ಜನರು ನಿಟ್ಟುಸಿರು ಬಿಡುವ ಮೂಲಕ ವ್ಯಾಘ್ರನ ನೋಡಲು ಜನಸಾಗರ ಹರಿದು ಬಂದಿತ್ತು. ಲಾಕ್ ಡೌನ್, ಸಾಮಾಜಿಕ ಅಂತರ ಮರೆತ ಜನ ಚಿರತೆ ನೋಡಲು ಮುಗಿಬಿದ್ರು. ಜನರನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ ಮಾಡಬೇಕಾಯಿತು.