ಚಿರತೆ ದಾಳಿಗೆ ಕಂಗೆಟ್ಟ ಗ್ರಾಮಸ್ಥರು.. ಕೈಯಲ್ಲಿ ದೊಣ್ಣೆ ಹಿಡಿದು ಓಡಾಟ - ತುಮಕೂರು ಚಿರತೆ ಸುದ್ದಿ
ತುಮಕೂರಿನಲ್ಲಿ ಚಿರತೆ ದಾಳಿ ಮಾಡಿದ್ದು ಜಿಲ್ಲೆಯ ಕೊರಟಗೆರೆ ತಾಲೂಕಿನ ಬುರುಗನಹಳ್ಳಿಯ ರಂಗರಾಜು ಎಂಬ ರೈತ ಗಂಭೀರವಾಗಿ ಗಾಯಗೊಂಡಿದ್ದಾರೆ. ಹೊಲಕ್ಕೆ ಹೋಗುತ್ತಿದ್ದಾಗ ಪೊದೆಯಲ್ಲಿ ಅಡಗಿ ಕುಳಿತಿದ್ದ ಚಿರತೆ ಏಕಾಎಕಿ ದಾಳಿ ಮಾಡಿದೆ. ಚಿರತೆಯನ್ನು ಕಂಡು ಗ್ರಾಮಸ್ಥರಲ್ಲಿ ಭೀತಿ ಉಂಟಾಗಿದ್ದು ಚಿರತೆ ಓಡಿಸಲು ದೊಣ್ಣೆಗಳನ್ನು ಹಿಡಿದು ಓಡಾಡುತ್ತಿದ್ದಾರೆ.