ಹಿರಿಕಾಟಿಯಲ್ಲಿ ಚಿರತೆ ಪ್ರತ್ಯಕ್ಷ, ಗ್ರಾಮಸ್ಥರಲ್ಲಿ ಆತಂಕ.. ವಿಡಿಯೋ - ಗುಂಡ್ಲುಪೇಟೆ ಚಿರತೆ ಪ್ರತ್ಯಕ್ಷ ಸುದ್ದಿ
ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಹಿರೀಕಾಟಿಯಲ್ಲಿ ಗ್ರಾಮದ ಪಿ.ಕುಮಾರ್ ಎಂಬುವರ ತೋಟದಲ್ಲಿ ಇಂದು ಬೆಳಗ್ಗೆ ಚಿರತೆ ಕಾಣಿಸಿದೆ. ನಂತರ ತೋಟದ ಕಾರ್ಮಿಕರು ಹಸುಗಳನ್ನು ಮೇಯಿಸಲು ಹೋದಾಗ ಮತ್ತೆ ಚಿರತೆ ಪ್ರತ್ಯಕ್ಷಗೊಂಡು ಭಯದ ವಾತಾವರಣ ಸೃಷ್ಟಿಸಿದೆ. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಗುಂಡ್ಲುಪೇಟೆ ಅರಣ್ಯ ಇಲಾಖೆ ಸಿಬ್ಬಂದಿ, ಚಿರತೆ ಕಂಡ ಸ್ಥಳದಲ್ಲಿ ಸಂಜೆಯವರೆಗೂ ಕೂಂಬಿಂಗ್ ನಡೆಸಿದರೂ ಕೂಡಾ ಕಾಣಿಸಿಕೊಳ್ಳದೇ ರೈತರಲ್ಲಿ ಆತಂಕ ಮೂಡಿಸಿದೆ. ಸೋಮಣ್ಣ ಎಂಬುವರ ಸಿಸಿ ಟಿವಿಯಲ್ಲಿ ಬೈಕ್ ಸವಾರರಿಗೆ ಅಡ್ಡ ಬಂದು ರಸ್ತೆದಾಟಿದ ದೃಶ್ಯ ಸೆರೆಯಾಗಿದೆ.