ಪರಿಷತ್ತಿಗೆ ಹೊರೆಯಾಗಿರುವ ಚುನಾವಣಾ ವ್ಯವಸ್ಥೆ ಬದಲಾವಣೆ: ಕಸಪ ರಾಜ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿ ಸಂಗಮೇಶ್ - ಜನಸಾಮಾನ್ಯರ ಪರಿಷತ್
ಶಿವಮೊಗ್ಗ: ಕನ್ನಡ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರ ಪರಿಷತ್ ಆಗಿಸಬೇಕೆಂಬ ಕನಸಿನೊಂದಿಗೆ ಕನ್ನಡ ಸಾಹಿತ್ಯ ಪರಿಷತ್ನ ರಾಜ್ಯಾಧ್ಯಕ್ಷ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಸಂಗಮೇಶ್ ಬಾದವಾಡಗಿ ಹೇಳಿದ್ದಾರೆ. ಅನಗತ್ಯ ಖರ್ಚುಗಳ ನಿಯಂತ್ರಣ, ಪರಿಷತ್ತಿಗೆ ಹೊರೆಯಾಗಿರುವ ಚುನಾವಣೆ ವ್ಯವಸ್ಥೆ ಬದಲಾವಣೆ, ಪರಿಷತ್ತಿನ ಮೂಲಕ ಮಾದರಿ ಕನ್ನಡ ಶಾಲೆಗಳ ಸ್ಥಾಪನೆ, ಅನ್ಯ ಭಾಷಿಕರಿಗೆ ಕನ್ನಡ ಕಲಿಸುವ ಕಲಿಕಾ ಕೇಂದ್ರಗಳನ್ನು ಆರಂಭಿಸುವುದು ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುವುದು ನಮ್ಮ ಗುರಿಯಾಗಿದೆ ಎಂದಿದ್ದಾರೆ.