ಸೆ.7ಕ್ಕೆ ಚಂದ್ರನ ಮೇಲೆ ಇಳಿಯಲಿದೆ ಚಂದ್ರಯಾನ-2 ಮಿಷನ್.. ಎ ಎಸ್ ಕಿರಣ್ ಕುಮಾರ್
ಬೆಂಗಳೂರು:ಭಾರತದ ಚಂದ್ರಯಾನ-2 ಯಶಸ್ವಿ ಉಡಾವಣೆಯಾಗಿ ಚಂದ್ರನತ್ತ ಸಾಗುತ್ತಿದ್ದು, ಈ ಕುರಿತು ಇಸ್ರೋದ ಮಾಜಿ ಅಧ್ಯಕ್ಷ, ಪದ್ಮಶ್ರೀ ಪುರಸ್ಕೃತರಾದ ಎ ಎಸ್ ಕಿರಣ್‌ಕುಮಾರ್ ಅವರು 'ಈಟಿವಿ ಭಾರತ್' ಜೊತೆ ಮಾತನಾಡಿ ಈವರೆಗೆ ಭೂಮಿಯ ಕಕ್ಷೆಯಲ್ಲಿ ಸುತ್ತುತ್ತಿದ್ದ ಚಂದ್ರಯಾನ-2 ಮಿಷನ್ ಅಗಸ್ಟ್ 14ರಿಂದ ಚಂದ್ರನತ್ತ ಪ್ರಯಾಣ ಬೆಳಸಲಿದೆ. ಬಳಿಕ ಅಗಸ್ಟ್ 21ರಂದು ಚಂದ್ರನ ಕಕ್ಷೆಗೆ ಸೇರಿ ಸೆಪ್ಟೆಂಬರ್ 6ರ ಮಧ್ಯರಾತ್ರಿ ಅಥವಾ 7ರಂದು ಚಂದ್ರನ ದಕ್ಷಿಣ ಧ್ರುವವನ್ನು ತಲುಪಿ ಸಾಫ್ಟ್ ಲ್ಯಾಂಡಿಂಗ್ ಆಗಲಿದೆ. ಇದು ಹಂತ ಹಂತವಾಗಿ ನಡೆಯುತ್ತಿದ್ದು, ತಾವು ಹಾಕಿಕೊಂಡ ಯೋಜನೆಯಂತೆ ಎಲ್ಲವೂ ನಡೆಯುತ್ತಿದೆ ಅಂತಾ ಮಾಹಿತಿ ನೀಡಿದರು.