ದಸರಾಗೆ ದಿನಗಣನೆ: ಚಾಮುಂಡೇಶ್ವರಿ ಉತ್ಸವ ಮೂರ್ತಿ ಸ್ವಚ್ಛತೆ ಕಾರ್ಯ ಆರಂಭ - Mysore Dasara News
ಮೈಸೂರು: ದಸರಾ ಉದ್ಘಾಟನೆಗೆ ಇನ್ನೂ ಕೇವಲ ನಾಲ್ಕು ದಿನಗಳು ಬಾಕಿ ಇದ್ದು ಸಿದ್ಧತೆ ಭರದಿಂದ ಸಾಗಿದೆ. ಇಂದು ಚಾಮುಂಡೇಶ್ವರಿ ಉತ್ಸವಮೂರ್ತಿಯನ್ನ ಸ್ವಚ್ಛಗೊಳಿಸಲು ಸಿಬ್ಬಂದಿ ಮುಂದಾಗಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಅರಮನೆಯಿಂದ ಚಾಮುಂಡಿ ಬೆಟ್ಟಕ್ಕೆ ತಲುಪಿದ ಉತ್ಸವ ಮೂರ್ತಿಯನ್ನ ದೇವಾಲಯದ ಆವರಣದಲ್ಲಿ ಶುಚಿ ಕಾರ್ಯ ಮಾಡಲಾಗುತ್ತಿದೆ. ನವರಾತ್ರಿಯಲ್ಲಿ ಉತ್ಸವಮೂರ್ತಿಗೆ ವಿಶೇಷ ಪೂಜೆ ನಡೆಯಲಿದೆ. ಪಂಚಲೋಹದಲ್ಲಿ ತಯಾರಿಸಲಾದ ವಿಶೇಷ ಮೂರ್ತಿಯನ್ನ ನುರಿತ ಸ್ವಯಂ ಸೇವಕರಿಂದ ಶುಚಿ ಕಾರ್ಯ ಮಾಡಲಾಗುತ್ತಿದೆ. ನಾಡದೇವಿಯ ಉತ್ಸವ ಮೂರ್ತಿ ಹಾಗೂ ಬೆಳ್ಳಿ ಪದಾರ್ಥಗಳ ಸ್ವಚ್ಛತೆ ಕಾರ್ಯ ಭರದಿಂದ ಸಾಗಿದೆ. ಅಕ್ಟೋಬರ್ 17ರಂದು ಉತ್ಸವ ಮೂರ್ತಿಗೆ ಚಾಮುಂಡೇಶ್ವರಿ ಬೆಟ್ಟದಲ್ಲಿ ಗಣ್ಯರು ಪುಷ್ಪಾರ್ಚನೆ ಮಾಡಿ ದಸರಾಗೆ ಚಾಲನೆ ನೀಡಲಿದ್ದಾರೆ.