ಚಾಮರಾಜಪೇಟೆ ಅಗ್ನಿಶಾಮಕ ಠಾಣೆ ಪೊಲೀಸರಿಂದ ಆಯುಧಪೂಜೆ... - ಚಾಮರಾಜಪೇಟೆ ಅಗ್ನಿಶಾಮಕ ಠಾಣೆ
ಆಯುಧಪೂಜೆ ಹಬ್ಬವನ್ನು ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ಸಂಭ್ರಮದಿಂದ ಬರಮಾಡಿಕೊಂಡಿದ್ದಾರೆ. ಚಾಮರಾಜಪೇಟೆ ಅಗ್ನಿಶಾಮಕ ಠಾಣೆಯ ಪೊಲೀಸರು ವಾಹನಗಳಿಗೆ ಹೂವಿನ ಹಾರ ಹಾಕಿ, ಬಾಳೆ ಕಂಬವನ್ನಿಟ್ಟು ಶೃಂಗಾರಗೊಳಿಸಿದರು. ಕುಂಬಳಕಾಯಿ ಹೊಡೆದು ಸಿಹಿ ಹಂಚಿ ಹಬ್ಬವನ್ನು ಸಂಭ್ರಮಿಸಿದರು. ವಿಶೇಷವಾಗಿ ಗೋವನ್ನು ಕರೆಯಿಸಿ ಶ್ರದ್ದಾಪೂರ್ವಕವಾಗಿ ಪೂಜೆ ನೆರವೇರಿಸಿದರು.