ದಸರಾ ಸ್ತಬ್ಧಚಿತ್ರ: ಚಾಮರಾಜನಗರದ ಟ್ಯಾಬ್ಲೋಗೆ ಪ್ರಥಮ ಬಹುಮಾನ - ಚಾಮರಾಜನಗರದ ಟ್ಯಾಬ್ಲೋಗೆ ಪ್ರಥಮ ಬಹುಮಾನ
ವಿಶ್ವವಿಖ್ಯಾತ ಜಂಬೂಸವಾರಿ ಮೆರವಣಿಗೆಯಲ್ಲಿ ಪ್ರಮುಖ ಆಕರ್ಷಕ ಸ್ತಬ್ಧಚಿತ್ರಗಳಿಗೆ ಮೈಸೂರು ದಸರಾ ಮಹೋತ್ಸದ ಸ್ತಬ್ಧಚಿತ್ರ ಸಮಿತಿ ಬಹುಮಾನ ಘೋಷಣೆ ಮಾಡಿದೆ. ಚಾಮರಾಜನಗರ ಜಿಲ್ಲೆಯ ಸಂವೃದ್ಧಿ ಸಂಪತ್ತಿನ ನಡುವೆ ಹುಲಿಯ ಸಂತೃಪ್ತ ತಾಣ ಪ್ರಥಮ ಬಹುಮಾನ ಪಡೆದುಕೊಂಡರೆ, ಉತ್ತರ ಕನ್ನಡ ಜಿಲ್ಲೆಯ ಕದಂಬ/ಬನವಾಸಿ ಸ್ತಬ್ಧಚಿತ್ರ ದ್ವಿತೀಯ, ತುಮಕೂರು ಜಿಲ್ಲೆಯ ನಡೆದಾಡುವ ದೇವರು ಶ್ರೀ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಸ್ತಬ್ಧಚಿತ್ರಕ್ಕೆ ತೃತೀಯ ಸ್ಥಾನ, ಚಿಕ್ಕಮಗಳೂರು ಜಿಲ್ಲೆಯ ಶಿಶಿಲ ಬೆಟ್ಟ, ವಾರ್ತಾಇಲಾಖೆಯ ಸರ್ಕಾರದ ಸೌಲಭ್ಯಗಳ ಮಾಹಿತಿ, ಶಿವಮೊಗ್ಗ ಜಿಲ್ಲೆಯ ಫಿಟ್ ಇಂಡಿಯಾ ಈ ಮೂರು ಸ್ತಬ್ಧಚಿತ್ರಗಳು ಸಮಾಧಾನಕರ ಬಹುಮಾನ ಪಡೆದುಕೊಂಡಿದೆ.