ಮಳೆ ನಿಂತರಷ್ಟೇ ಪಟಾಕಿ ವ್ಯಾಪಾರ ಬಂಪರ್.. ಇಲ್ಲಾಂದ್ರೆ,ಪಾಪರ್! - ಚಾಮರಾಜನಗರ ಪಟಾಕಿ ವ್ಯಾಪರ ಸುದ್ದಿ
ಚಾಮರಾಜನಗರ:ಸಂಭ್ರಮದ ಬೆಳಕಿನ ಹಬ್ಬಕ್ಕೆ ಈ ಬಾರಿ ಮಳೆ ಅಡ್ಡಿಯಾಗುವ ಆತಂಕ ಕವಿದಿದೆ. ಪಟಾಕಿ ವ್ಯಾಪಾರಿಗಳಲ್ಲಿ ಆತಂಕ ಶುರುವಾಗಿದೆ. ಚಾಮರಾಜನಗರ,ಕೊಳ್ಳೇಗಾಲ,ಗುಂಡ್ಲುಪೇಟೆಯಲ್ಲಿ ಕಳೆದ 5 ದಿನಗಳಿಂದ ಜೋರು ಮಳೆಯಾಗುತ್ತಿದೆ. ಪಟಾಕಿ ವ್ಯಾಪಾರ ತಗ್ಗಿದ್ದು,ಹನೂರಿನಲ್ಲಿ ಕೊಂಚಮಟ್ಟಿಗೆ ವ್ಯಾಪಾರವಾಗುತ್ತಿದೆ. ನಗರ ಮತ್ತು ಪಟ್ಟಣ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಭಾಗದಲ್ಲಿ ಪಟಾಕಿ ವ್ಯಾಪಾರವಾಗಿಲ್ಲ. ಇದರಿಂದ ಪಟಾಕಿ ವ್ಯಾಪಾರಿಗಳ ಮೊಗದಲ್ಲಿ ಮಂದಹಾಸವಿಲ್ಲ. ಮೈಸೂರು ಭಾಗದಲ್ಲಿ ದೀಪಾವಳಿ ಕಳೆಗಟ್ಟುವುದರಿಂದ ಮಳೆ ನಿಂತರೇ ಗ್ರಾಹಕರು ಬರಬಹುದು ಎಂಬುದು ವ್ಯಾಪಾರಿಗಳ ನಿರೀಕ್ಷೆ.