ಮೂರು ಕುರಿ ತಿಂದು, ಬೋನಿಗೆ ಬಿದ್ದ ಚಿರತೆ: ಗ್ರಾಮಸ್ಥರ ಆತಂಕ ನಿವಾರಣೆ - ಚಾಮರಾಜನಗರದಲ್ಲಿ ಕುರಿ ತಿಂದ ಚಿರತೆ ಸೆರೆ
ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ರಸ್ತೆ ಪಕ್ಕದಲ್ಲಿ ಇರಿಸಿದ್ದ ಬೋನಿಗೆ ಚಿರತೆ ಬಿದ್ದಿದೆ.ಇದಕ್ಕೂ ಮೊದಲು ಮೂರು ಕುರಿಗಳನ್ನು ತಿಂದಿರುವ ಚಿರತೆ ಸುತ್ತಲಿನ ಗ್ರಾಮಗಳಲ್ಲಿ ಆತಂಕ ಸೃಷ್ಟಿಸಿತ್ತು. ಗುರುವಾರವಷ್ಟೇ ಬನ್ನಿತಾಳಪುರದಲ್ಲಿ ಕುರಿಗಳ ಮೇಲೆ ದಾಳಿ ನಡೆಸಿದ್ದು ಜನರ ಕೂಗಾಟಕ್ಕೆ ಚಿರತೆ ಪರಾರಿಯಾಗಿತ್ತು. ಆದರೆ ಇಂದು ವೀರನಪುರ-ಇಂಗಲವಾಡಿ ರಸ್ತೆಯ ಜಮೀನಿನಲ್ಲಿ ಇಟ್ಟ ಬೋನಿನಲ್ಲಿ ಕಾಡು ಪ್ರಾಣಿ ಕೊನೆಗೂ ಸೆರೆಯಾಗಿದೆ.