ಬಡವರಿಗೆ ಆಹಾರ ಕಿಟ್ ವಿತರಿಸಿದ ರಾಮನಗರದ ಚಕ್ಕೆರೆ ಗ್ರಾಮ ಪಂಚಾಯತ್ - food to the poor
ಲಾಕ್‌ಡೌನ್ ಕಾರಣ ನಿರ್ಗತಿಕರು ಹೊರ ರಾಜ್ಯದಿಂದ ಉದ್ಯೋಗವನ್ನರಸಿ ಬಂದ ಕುಟುಂಬಗಳಿಗೆ ಆಹಾರ ಸಮಸ್ಯೆ ಕಾಡತೊಡಗಿದೆ. ಇದನ್ನು ಮನಗಂಡ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಚಕ್ಕೆರೆ ಗ್ರಾಮ ಪಂಚಾಯತ್ ವತಿಯಿಂದ ಸುಮಾರು 150 ಕುಟುಂಬಗಳಿಗೆ ಆಹಾರದ ಕಿಟ್ ವಿತರಿಸಿದೆ. ಕಿಟ್/ಬ್ಯಾಗ್ನಲ್ಲಿ ಅಕ್ಕಿ, ಬೇಳೆ, ಅಡುಗೆ ಎಣ್ಣೆ, ಗೋಧಿ ಹಿಟ್ಟು, ಈರುಳ್ಳಿ, ಸಾಂಬಾರ್ ಪುಡಿ, ಉರುಳಿ ಕಾಳು, ರವೆ ಹಾಗು ಸಕ್ಕರೆ ಸೇರಿದಂತೆ ಅಗತ್ಯ ವಸ್ತುಗಳನ್ನು ಪ್ಯಾಕ್ ಮಾಡಲಾಗಿದೆ. ಚಕ್ಕೆರೆ ಸೇರಿದಂತೆ ಆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಕಡು ಬಡವರು ಹಾಗೂ ಹೊರ ರಾಜ್ಯದಿಂದ ಉದ್ಯೋಗವನ್ನರಸಿ ಬಂದಿರುವ ಕುಟುಂಬಗಳಿಗೆ ಆಹಾರ ಧಾನ್ಯ ವಿತರಣೆ ಮಾಡಲಾಗಿದೆ.