ಸಮಯ ಮಿಂಚಿಲ್ಲ..ಬೇಗ ಬಂದು ವೋಟ್ ಮಾಡಿ ಅಂದ್ರು ಸೆಂಚುರಿ ಸ್ಟಾರ್ - undefined
ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ತಮ್ಮ ಪತ್ನಿ ಗೀತಾ ಅವರೊಂದಿಗೆ ರಾಚೇನಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಗೆ ಬಂದು ಮತ ಚಲಾಯಿಸಿದರು. ನಂತರ ಮಾತನಾಡಿದ ಅವರು, ನನ್ನ ಹಕ್ಕನ್ನು ನಾನು ಚಲಾಯಿಸಿದ್ದೇನೆ. ಇನ್ನೂ ಸಮಯ ಆಗಿಲ್ಲ, ಎಲ್ಲರೂ ಬಂದು ವೋಟ್ ಮಾಡಿ. ನಿರಂತರ ಜಾಗೃತಿ ಮೂಡಿಸಿದರೂ ಯುವಜನಾಂಗ ನಿರೀಕ್ಷೆಗಿಂತ ಮತದಾನ ಮಾಡಿಲ್ಲ. ಆದಷ್ಟು ಬೇಗ ಬಂದು ಮತ ಚಲಾಯಿಸಿ ಎಂದು ಮನವಿ ಮಾಡಿದರು.