ಕುಟುಂಬ ಸದಸ್ಯರ ಜತೆಗೆ ದೀಪ ಬೆಳಗಿದ ಸಚಿವ ಸುರೇಶ ಅಂಗಡಿ.. - Central minister Suresh angadi
ಬೆಳಗಾವಿ: ಕೊರೊನಾ ವಿರುದ್ಧ ಹೋರಾಡಲು ದೀಪ ಬೆಳಗಿಸಿ ಎಂದು ದೇಶದ ಜನರಿಗೆ ನೀಡಿದ ಕರೆಗೆ ಕುಂದಾನಗರಿಯಲ್ಲಿ ಸಖತ್ ರೆಸ್ಪಾನ್ಸ್ ವ್ಯಕ್ತವಾಯಿತು. ಇಲ್ಲಿನ ವಿಶ್ವೇಶ್ವರ ನಗರದ ನಿವಾಸದ ಮುಂಭಾಗದಲ್ಲಿ ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಸಚಿವ ಸುರೇಶ ಅಂಗಡಿ ಅವರು ಕುಟುಂಬ ಸಹಿತ ದೀಪ ಬೆಳಗಿದರು. ಪತ್ನಿ ಮಂಗಳಾ ಅಂಗಡಿ, ಪುತ್ರಿ ಶೃದ್ಧಾ ಶೆಟ್ಟರ್ ಕೂಡ ದೀಪ ಬೆಳಗಿಸಿ ಪ್ರಧಾನಿ ಕರೆಗೆ ಬೆಂಬಲ ಸೂಚಿಸಿದರು. ಮನೆಯ ಲೈಟ್ ಆಫ್ ಮಾಡಿ ಕೈಯಲ್ಲಿ ದೀಪದ ಹಣತೆ ಹಿಡಿದು ಸಚಿವ ಅಂಗಡಿ ಕುಟುಂಬ ದೀಪ ಬೆಳಗಿದರು. ಕುಂದಾನಗರಿಯ ಎಲ್ಲ ಬಡಾವಣೆಗಳ ಜನರು ಕೂಡ ಮನೆಯ ಲೈಟ್ ಆಫ್ ಮಾಡಿ ದೀಪ ಬೆಳಗಿದರು.