ಮಕರ ಸಂಕ್ರಾಂತಿಗೆ ರಂಗೋಲಿಗಳ ಚಿತ್ತಾರ: ವೆಂಕಟಾಪುರದಲ್ಲಿ ಅದ್ಧೂರಿ ಆಚರಣೆ - ಮಕರ ಸಂಕ್ರಾಂತಿ ವೆಂಕಟಾಪುರ
ಬೆಂಗಳೂರು: ಮಕರ ಸಂಕ್ರಮಣದ ಅಂಗವಾಗಿ ಕೋರಮಂಗಲದ ವೆಂಕಟಾಪುರದಲ್ಲಿ ಅದ್ದೂರಿ ಆಚರಣೆ ನಡೆದಿದ್ದು, ಬಗೆ ಬಗೆಯ ರಂಗೋಲಿಗಳು ನೋಡುಗರ ಸಂತಸವನ್ನು ಇಮ್ಮಡಿಗೊಳಿಸಿತ್ತು. ಹಳ್ಳಿಗಳಲ್ಲಿ ಹಬ್ಬದ ಸಡಗರವನ್ನು ಆಚರಿಸುವಂತೆ ಇಲ್ಲಿಯೂ ಸಂಭ್ರಮದಿಂದ ಹಬ್ಬ ಆಚರಿಸಲಾಗಿದ್ದು, ಮಹಿಳೆಯರು, ಮಕ್ಕಳು ರಂಗೋಲಿ ಬಿಡಿಸಿ, ಬಣ್ಣ ತುಂಬಿ ಸಂತಸಪಟ್ಟರು. ಇತ್ತೀಚಿನ ದಿನಗಳಲ್ಲಿ ಹಳ್ಳಿಯ ವಾತಾವರಣ, ಆಚರಣೆಗಳು ಮರೆಯಾಗುತ್ತಿರುವುದರಿಂದ ಎಲ್ಲರೂ ಒಟ್ಟಾಗಿ ಸೇರಿ ಸಂಭ್ರಮಿಸಲು ಇಂತಹ ಆಚರಣೆಗಳ ಅಗತ್ಯವಿದೆ ಎಂದು ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ.