ಯಾದಗಿರಿಯಲ್ಲಿ 'ಕೈ' ಕಾರ್ಯಕರ್ತರ ಸಂಭ್ರಮಾಚರಣೆ - ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ
ಯಾದಗಿರಿ: ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ದೊರತ ಖುಷಿಗೆ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚಾರಣೆ ನಡೆಸಿದರು. ನಗರದ ಸುಭಾಷ್ ವೃತ್ತದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಕೈ ಕಾರ್ಯಕರ್ತರು ಸಂಭ್ರಮಿಸಿದರು. ಡಿಕೆಶಿಗೆ ಕೆಪಿಸಿಸಿ ಪಟ್ಟ ನೀಡಿದ ಹೈ ಕಮಾಂಡಗೆ ಅಭಿನಂದನೆ ಸಲ್ಲಿಸಿದ ಕಾರ್ಯಕರ್ತರು ಟ್ರಬಲ್ ಶೂಟರ್ ಪರ ಜಯಘೋಷ ಕೂಗಿದರು.