ನೂತನ ಸಚಿವ ಸಿ.ಟಿ ರವಿ ಮನೆಯಲ್ಲಿ ಮನೆ ಮಾಡಿದ ಸಂಭ್ರಮ - ತಿಮ್ಮೇಗೌಡ ಹಾಗೂ ಹೊನ್ನಮ್ಮ
ಚಿಕ್ಕಮಗಳೂರು : ಶಾಸಕ ಸಿ.ಟಿ ರವಿ ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನಲೆ ಅವರ ಹುಟ್ಟೂರಾದ ಚಿಕ್ಕಮಗಳೂರು ತಾಲೂಕಿನ ಚಿಕ್ಕಮಾಗರವಳ್ಳಿಯಲ್ಲಿರುವ ಅವರ ತಂದೆ ತಾಯಿ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಶಾಸಕ ರವಿ ಅವರ ತಂದೆ ತಿಮ್ಮೇಗೌಡ ಹಾಗೂ ಹೊನಮ್ಮ ಸಿಹಿ ತಿಂದು ಸಂಭ್ರಮಿಸಿದ್ದಾರೆ. ನನ್ನ ಮಗನಿಗೆ ಸಚಿವ ಸ್ಥಾನ ಸಿಕ್ಕಿದ್ದು ಸಂತಸ ತಂದಿದೆ.ಆತನಿಗೆ ಒಳ್ಳೆಯದಾಗಲಿ ಎಂದೂ ಅವರ ತಂದೆ ತಾಯಿ ಆಶೀರ್ವಾದ ಮಾಡಿದ್ದಾರೆ.