ಯುಗಾದಿ ಹಬ್ಬವನ್ನು ಮನೆ ಒಳಗೇ ಆಚರಿಸಿ: ಎಂಟಿಬಿ ನಾಗರಾಜ್ ಸಲಹೆ - ಮಾಜಿ ಸಚಿವ ಎಂಟಿಬಿ ನಾಗರಾಜ್
ಬೆಂಗಳೂರು: ಮಾಜಿ ಸಚಿವ ಎಂಟಿಬಿ ನಾಗರಾಜ್ ಅವರು ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯ ಕೋರಿದ್ದಾರೆ. ಇವತ್ತು ಯುಗಾದಿ ಹಬ್ಬ, ಅದರ ಜೊತೆಗೆ ಕೊರೊನಾ ಎಂಬ ಮಾರಾಣಾಂತಿಕ ಕಾಯಿಲೆ ವಿಶ್ವದೆಲ್ಲೆಡೆ ವ್ಯಾಪಿಸಿದೆ. ಇದರಿಂದ ನಿನ್ನೆ ಪ್ರಧಾನಿ ಮೋದಿಯವರು ಹೇಳಿದಂತೆ ಮನೆಯ ಮುಂದೆ ಲಕ್ಷ್ಮಣ ರೇಖೆ ಹಾಕಿ ಮನೆಯ ಹೊರಗೆ ಬರದಂತೆ ನೋಡಿಕೊಳ್ಳಿ. ಏಪ್ರಿಲ್ 14ರ ವರೆಗೆ ಮನೆ ಒಳಗೆ ಇರಿ ಎಂದು ಜನರಲ್ಲಿ ಮನವಿ ಮಾಡಿಕೊಂಡರು. ಮನೆಯಿಂದ ಹೊರಬರದಂತೆ ಯುಗಾದಿ ಆಚರಿಸಿ, ಗುಂಪಾಗಿ ಎಲ್ಲೂ ಸೇರಬೇಡಿ. ಅವಶ್ಯಕತೆ ಇದ್ದರೆ ಮಾತ್ರ ಹೊರಬನ್ನಿ. ಏ.14 ರವರೆಗೆ ಗೃಹ ಬಂಧನದಲ್ಲಿರಿ ಎಂದರು.