ಸಿರವಾರ ಪಟ್ಟಣದಲ್ಲಿ ಸಂಭ್ರಮಾಚರಣೆಯ ಹಾಲುಗಂಬ ಉತ್ಸವ - halugamba utsava raichur news
🎬 Watch Now: Feature Video
ರಾಯಚೂರು: ಜಿಲ್ಲೆಯ ಸಿರವಾರ ಪಟ್ಟಣದಲ್ಲಿ ಅದ್ದೂರಿಯಾಗಿ ಹಾಲುಗಂಬ ಉತ್ಸವ ನಡೆಯಿತು. ಪಟ್ಟಣದ ಶ್ರೀ ಬಯಲು ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗದಲ್ಲಿ ಎಳ್ಳು ಅಮಾವಸ್ಯೆಯ ಕರಿಯ ದಿನದಂದು ಈ ಉತ್ಸವ ನಡೆಯುತ್ತದೆ. ಸಾಕಷ್ಟು ಪರಂಪರೆ ಹೊಂದಿರುವ ಈ ಹಾಲುಗಂಬಕ್ಕೆ ಲೋಳೆ ರಸ, ಜಾಜ ಲೇಪನ ಮಾಡಲಾಗಿರುತ್ತದೆ. ಈ ಹಾಲುಗಂಬವನ್ನು ನಾಯಕ ಸಮುದಾಯಕ್ಕೆ ಸೇರಿದವರು ಮಾತ್ರ ಏರುವ ಪದ್ದತಿಯಿದ್ದರೆ, ಕಂಬವನ್ನು ಹತ್ತುವ ವೇಳೆ ಕೆಳಗಡೆಯಿಂದ ಗಂಗಾಮತ ಸಮಾಜದವರು ನೀರು ಎರಚುತ್ತಾರೆ. ಈ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದವರಿಗೆ ದೇವಸ್ಥಾನದಿಂದ 11 ತೊಲ ಬೆಳ್ಳಿ ಖಡ್ಗ, ದ್ವಿತೀಯ ಸ್ಥಾನ ಪಡೆದವರಿಗೆ 5 ತೊಲ ಬೆಳ್ಳಿ ಖಡ್ಗ ನೀಡಿ ಸನ್ಮಾನಿಸಿ ಗೌರವಿಸಲಾಗುತ್ತದೆ. ಈ ಉತ್ಸವನ್ನ ಕಣ್ತುಂಬಿಕೊಳ್ಳಲು ಸಿರವಾರ ಸೇರಿದಂತೆ ಪಟ್ಟಣದ ಗ್ರಾಮಗಳ ಸಾವಿರಾರು ಜನರು ಆಗಮಿಸಿದ್ದರು.