ಕಲಬುರಗಿಯಲ್ಲಿ ಅದ್ಧೂರಿ ಈದ್ ಮಿಲಾದ್ ಆಚರಣೆ
ಈದ್ ಮಿಲಾದ್ ಹಬ್ಬವನ್ನು ಕಲಬುರ್ಗಿಯಲ್ಲಿ ಮುಸ್ಲೀಮರು ಸಂಭ್ರಮದಿಂದ ಆಚರಿಸಿದರು. ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ಬೃಹತ್ ಮೆರವಣಿಗೆಗೆ ಖ್ವಾಜಾ ಬಂದೇನವಾಜ್ ದರ್ಗಾದ ಪೀಠಾಧಿಪತಿ ಡಾ.ಸೈಯದ್ ಖುಸ್ರೋ ಹುಸೇನಿ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಮುಸ್ಲೀಮರು ಭಾಗವಹಿಸಿ, ಮೆರವಣಿಗೆಯುದ್ದಕ್ಕೂ ಪೈಗಂಬರರ ಭಕ್ತಿ ಗೀತೆಗಳು, ಕವಾಲಿ ಹಾಡಿದರು. ಜೊತೆಗೆ ಟಿಪ್ಪುವಿನ ವೇಷ ಧರಿಸಿದ ಯುವಕರು, ಕುದುರೆ ಹಾಗೂ ಒಂಟೆಗಳ ಮೇಲೆ ಧ್ವಜ ಹಿಡಿದು ಕುಳಿತಿದ್ದ ಮಕ್ಕಳು ಗಮನ ಸೆಳೆದರು. ಮೆರವಣಿಗೆಯು ಮುಸ್ಲಿಂ ಚೌಕ್ನಿಂದ ಪ್ರಾರಂಭವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಹಫ್ತ್ ಗುಂಬಜ್ನಲ್ಲಿ ಕೊನೆಗೊಂಡಿತು.