ಚಾಮುಂಡಿ ಬೆಟ್ಟದ ಸುತ್ತ ಇನ್ಮುಂದೆ ಸಿಸಿ ಕ್ಯಾಮರಾ ಕಣ್ಗಾವಲು: ಸಚಿವ ವಿ.ಸೋಮಣ್ಣ - ಚಾಮುಂಡಿ ಬೆಟ್ಟಕ್ಕೆ ಸಿಸಿಟಿವಿ ಕಣ್ಗಾವಲು
ಮೈಸೂರು: ಚಾಮುಂಡಿ ಬೆಟ್ಟದ ಮೇಲಿರುವ ಅಂಗಡಿಗಳಿಗೆ ಪ್ರವಾಸಿಗರನ್ನು ಸೆಳೆಯುವ ವಿಚಾರವಾಗಿ ರಸ್ತೆಯಲ್ಲಿಯೇ ಮಧ್ಯವರ್ತಿಗಳು ಹೊಡೆದಾಡಿಕೊಂಡಿದ್ದರು. ಇಂತಹ ಅನಾಹುತಗಳನ್ನ ತಪ್ಪಿಸುವ ಸಲುವಾಗಿ ಚಾಮುಂಡೇಶ್ವರಿ ಬೆಟ್ಟದ ಹೊರ ಆವರಣದ ಸುತ್ತ ಸಿಸಿ ಕ್ಯಾಮರಾ ಅಳವಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ. ಇದೇ ವೇಳೆ ಚಾಮುಂಡಿ ಬೆಟ್ಟದ ಮೇಲೆ ನಡೆಯುತ್ತಿದ್ದ ವಿವಿಧ ಕಾಮಗಾರಿಗಳನ್ನು ಸಚಿವರು ಪರಿಶೀಲನೆ ನಡೆಸಿದ್ರು. ಈ ವೇಳೆ ಸಂಸದ ಪ್ರತಾಪ್ ಸಿಂಹ ಉಪಸ್ಥಿತರಿದ್ದರು.