ಸಿದ್ದಗಂಗಾ ಜಾನುವಾರು ಜಾತ್ರೆಯಲ್ಲಿ ಹಳ್ಳಿಕಾರ್ ತಳಿಯದ್ದೇ ಕಾರುಬಾರು...
ತುಮಕೂರು: ತುಮಕೂರಿನ ಸಿದ್ದಗಂಗಾ ಮಠದಲ್ಲಿ ನಡೆಯುತ್ತಿರುವ ಬೃಹತ್ ಜಾನುವಾರು ಜಾತ್ರೆ ಹಲವು ದೇಶಿ ತಳಿ ಹಸುಗಳ ವಿನಿಮಯಕ್ಕೆ ಉತ್ತಮ ವೇದಿಕೆಯಾಗಿದೆ. ಅದರಲ್ಲೂ ಮುಖ್ಯವಾಗಿ ಜಾತ್ರೆಯಲ್ಲಿ ಹಳ್ಳಿಕಾರ್ ತಳಿ ಜಾನುವಾರುಗಳ ಕಾರುಬಾರು ಜೋರಾಗಿದೆ. ಜಾತ್ರೆಯ ತುಂಬೆಲ್ಲಾ ಹಳ್ಳಿಕಾರ್ ತಳಿಯ ಜಾನುವಾರುಗಳ ಸಂಖ್ಯೆಯೇ ಅಧಿಕವಾಗಿದ್ದು, ಹುಬ್ಬಳ್ಳಿ, ಧಾರವಾಡ, ಚಿಕ್ಕಬಳ್ಳಾಪುರ ಅಲ್ಲದೆ ತಮಿಳುನಾಡು, ಆಂಧ್ರದಿಂದ ಪ್ರದೇಶದಿಂದಲೂ ರೈತರು ಬಂದು ಜಾನುವಾರುಗಳನ್ನು ಖರೀಸುತ್ತಿದ್ದಾರೆ.