ಕರ್ನಾಟಕ

karnataka

ETV Bharat / videos

ತಾಕತ್ ಇದ್ರೆ ನನ್ನ ಹಿಡಿಯಿರಿ: ಟ್ರಾಫಿಕ್ ಪೊಲೀಸ್​ಗೇ ಓಪನ್ ಚಾಲೆಂಜ್ ಹಾಕಿದ ಡ್ರೈವರ್​! - Bangalore police news

By

Published : Sep 22, 2019, 12:57 PM IST

ಎರಡು ದಿನಗಳ ಹಿಂದೆ ಹಲಸೂರು ಗೇಟ್ ಬಳಿ ಪೊಲೀಸ್ ಪೇದೆವೋರ್ವ ಟೆಂಪೋ ಚಾಲಕನಿಗೆ ಒನ್ ವೇಯಲ್ಲಿ ಹೋಗಿದ್ದಕ್ಕೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಥಳಿಸಿದ ಘಟನೆ ಸಿಟಿ ಮಾರ್ಕೆಟ್ ಫ್ಲೈ ಓವರ್ ಬಳಿ ನಡೆದಿತ್ತು. ಈ ಪ್ರಕರಣಕ್ಕೆ ಇದೀಗ ಮೈಸೂರಿನ ಕ್ಯಾಬ್ ಚಾಲಕನೋರ್ವ ತಾಕತ್ತಿದ್ರೆ ನನ್ನ ಕಾರ್ ತಡೆದು, ಫೈನ್ ಹಾಕಿ ಎಂದು ಚಾಲಕನನ್ನು ಥಳಿಸಿದ್ದ ಪೊಲೀಸ್ ಪೇದೆಗೆ ಸವಾಲು ಹಾಕಿದ್ದಲ್ಲದೆ, ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾನೆ. ನನ್ನ ಬಳಿ ಯಾವುದೇ ಡಾಕ್ಯುಮೆಂಟ್ ಇಲ್ಲ, ನಾಲ್ಕು ವರ್ಷಗಳ ಹಿಂದೆನೇ ಎಲ್ಲಾ ಅವಧಿ ಮುಗಿದಿವೆ. ಅ. 2ರಂದು ಬೆಂಗಳೂರಿನ ಏರ್​​ರ್ಪೋಟ್ ಗೆ ಬರಲಿದ್ದೇನೆ‌. ತಾಕತ್ ಇದ್ರೆ ನನ್ನ ಹಿಡಿಯಿರಿ‌ ಎಂದು ಅವಾಜ್​ ಹಾಕಿದ್ದಾನೆ. ಸದ್ಯ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಹಿರಿಯ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

ABOUT THE AUTHOR

...view details