ವಾರದಲ್ಲೇ ಮತ್ತೊಂದು ಚಿರತೆ ಸೆರೆ... ನಿಟ್ಟುಸಿರು ಬಿಟ್ಟ ಹೊಸದುರ್ಗದ ಜನತೆ - captured leopard at hosadurga
ಹೊಸದುರ್ಗ ನಗರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಜೋಡಿ ಚಿರತೆಗಳು ಸೆರೆಯಾಗಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಎರಡು ಚಿರತೆಗಳ ಪೈಕಿ ಒಂದು ಚಿರತೆ ಕಳೆದ ವಾರ ಬೋನಿಗೆ ಬಿದ್ದರೆ, ನಿನ್ನೆ ತಡರಾತ್ರಿ ಮತ್ತೊಂದು ಚಿರತೆ ಬೋನಿಗೆ ಬಿದ್ದಿದೆ. ವಿದ್ಯಾನಗರದ ರಾಗಿ ಶಿವಮೂರ್ತಪ್ಪ ಎಂಬುವರ ದಾಳಿಂಬೆ ತೋಟದಲ್ಲಿ ಚಿರತೆ ಸೆರೆಯಾಗಿದ್ದು, ಜನರು ನಿರಾತಂಕವಾಗಿದ್ದಾರೆ. ಇನ್ನು ಬೋನಿಗೆ ಬಿದ್ದ ಜೋಡಿ ಚಿರತೆಗಳು ಜನರನ್ನು ಭಯಬೀಳಿಸಿದ್ದವು. ಸ್ಥಳೀಯರ ಒತ್ತಾಯದ ಮೇರೆಗೆ ಅರಣ್ಯ ಇಲಾಖೆ ಚಿರತೆ ಸೆರೆಗೆ ಬೋನ್ ಇರಿಸುವ ಮೂಲಕ ಚಿರತೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.