ಗ್ರಾ.ಪಂ. ಚುನಾವಣೆ: ಮತಗಟ್ಟೆಗೆ ಪೂಜೆ ಸಲ್ಲಿಸಿದ ಅಭ್ಯರ್ಥಿ ಪರ ಬೆಂಬಲಿಗರು - ಬೆಳಗಾವಿ
ಚಿಕ್ಕೋಡಿ/ ಬೆಳಗಾವಿ: ಗ್ರಾಮ ಪಂಚಾಯಿತಿ ಕಣದಲ್ಲಿರುವ ಎಲ್ಲ ಅಭ್ಯರ್ಥಿಗಳು ತಮ್ಮ ಗೆಲುವಿಗೆ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಆ ಪೈಕಿ ಕೆಲವರು ದೇವರ ಮೊರೆ ಹೋಗಿದ್ದಾರೆ. ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಾದಗೂಡ ಗ್ರಾಮದಲ್ಲಿ ಮತದಾನಕ್ಕೆ ಮುನ್ನ ಅಭ್ಯರ್ಥಿ ಪರ ಬೆಂಬಲಿಗರು ಮತ ಕೇಂದ್ರದಲ್ಲಿ ಪೂಜೆ ಮಾಡಿದರು. ಇತ್ತ ತಾಲೂಕಿನ ಹಿರೇಬಾಗೇವಾಡಿ ಗ್ರಾಮದಲ್ಲೂ ಇಂತಹದ್ದೇ ಘಟನೆ ಕಂಡುಬಂದಿದೆ.