ದೇಶಾದ್ಯಂತ ಲಾಕ್ ಡೌನ್: ಕಣವಿ ವೀರಭದ್ರೇಶ್ವರ ರಥೋತ್ಸವ ರದ್ದು - ಬಾಗಲಕೋಟೆಯ ಕಣವಿ ವೀರಭದ್ರೇಶ್ವರ ರಥೋತ್ಸವ
ಬಾಗಲಕೋಟೆ: ಕೊರೊನಾ ಭೀತಿ ಹಿನ್ನೆಲೆ ದೇಶಾದ್ಯಂತ ಲಾಕ್ ಡೌನ್ ಇರುವ ಪರಿಣಾಮ ಬಾಗಲಕೋಟೆಯ ಕಣವಿ ವೀರಭದ್ರೇಶ್ವರ ರಥೋತ್ಸವ ರದ್ದುಗೊಳಿಸಲಾಗಿದೆ. ದೇವಸ್ಥಾನದ ಅರ್ಚಕರು ಬೆರಳೆಣಿಕೆ ಭಕ್ತರಿಂದ ವೀರಭದ್ರೇಶ್ವರ ದೇವರ ಪೂಜೆ ಕಾರ್ಯ ಸರಳವಾಗಿ ನಡೆಯಿತು. ಜಿಲ್ಲಾಡಳಿತ ಹಾಗೂ ಸ್ಥಳೀಯ ಶಾಸಕರು ರಥೋತ್ಸವ ನಡೆಸದಂತೆ ಸೂಚನೆ ನೀಡಿದರು. ಹಾಗಾಗಿ ಗ್ರಾಮಸ್ಥರು ಒಕ್ಕೋರಿಲಿನಿಂದ ರಥೋತ್ಸವ ಕೈ ಬಿಟ್ಟು ಕೇವಲ ನಾಮಕೇವಾಸ್ಥೆ ಪೂಜೆ ಮಾಡಲಾಗಿದೆ ಎಂದು ದೇವಸ್ಥಾನದ ಟ್ರಸ್ಟ್ ಮಂಡಳಿ ಸದಸ್ಯರು ಮಾಹಿತಿ ನೀಡಿದರು.