ಸೂರ್ಯ ಗ್ರಹಣ... ಸಿಎಂ ದೋಷ ನಿವಾರಣೆಗೆ ಅಭಿಮಾನಿಗಳಿಂದ ವಿಶೇಷ ಪೂಜೆ - ಸಿಎಂ ದೋಷ ನಿವಾರಣೆಗೆ ಮಂಡ್ಯದಲ್ಲಿ ಅಭಿಮಾನಿಗಳಿಂದ ವಿಶೇಷ ಪೂಜೆ
ಮಂಡ್ಯ: ಕೇತುಗ್ರಸ್ಥ ಸೂರ್ಯ ಗ್ರಹಣ ಹಿನ್ನೆಲೆ ಸಿಎಂ ಯಡಿಯೂರಪ್ಪ ಅವರ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರದಂತೆ ಆಂಜನೇಯನಿಗೆ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದ್ದಾರೆ. ತಾಲೂಕಿನ ಉಪ್ಪರಕನಹಳ್ಳಿ ಗ್ರಾಮದ ಹನುಮಂತನ ದೇವಾಲಯದಲ್ಲಿ ಬೆಳಗ್ಗೆಯೇ ದೇವರಿಗೆ ಅಭಿಷೇಕ ಮಾಡಿಸಿ, ವಿಶೇಷ ಪೂಜೆ ಸಲ್ಲಿಸಿದ ಅಭಿಮಾನಿಗಳು, ಹರಕೆಯನ್ನು ಕಟ್ಟಿಕೊಂಡಿದ್ದಾರೆ. ವೃಶ್ಚಿಕ ರಾಶಿಯವರಿಗೆ ಈ ಗ್ರಹಣ ಕೆಟ್ಟ ಪರಿಣಾಮ ಬೀರಲಿದೆ ಎಂಬ ಜ್ಯೋತಿಷಿಗಳ ಮಾತಿನ ಹಿನ್ನೆಲೆ ಗ್ರಹಣ ದೋಷಕ್ಕಾಗಿ ಈ ಪೂಜೆ ಸಲ್ಲಿಸಲಾಗಿದೆ ಎಂದು ತಿಳಿದುಬಂದಿದೆ.