ಮುನಿರತ್ನ ಅವರಿಗೆ ಸಚಿವ ಸ್ಥಾನ ಸಿಗಬೇಕಾಗಿತ್ತು; ಬೈರತಿ ಬಸವರಾಜ್ - ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್
ಈಗಾಗಲೇ ಸಚಿವ ಸಂಪುಟ ವಿಸ್ತರಣೆ ಆಗಿದ್ದರೂ ಕೂಡ ಕೆಲ ಸಚಿವರು ಕೆಲವರ ಪರ ಬ್ಯಾಟ್ ಬೀಸುತ್ತಿದ್ದಾರೆ. ಇದೀಗ ಮುನಿರತ್ನ ಪರ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಕೂಡ ಬ್ಯಾಟ್ ಬೀಸಿದ್ದಾರೆ. ಮುನಿರತ್ನ ಅವರಿಗೆ ಸಚಿವ ಸ್ಥಾನ ಸಿಗಬೇಕಾಗಿತ್ತು. ಆದ್ರೆ ಸಿಕ್ಕಿಲ್ಲ. ಮುಖ್ಯಮಂತ್ರಿಗಳು ಮುನಿರತ್ನ ಅವರಿಗೆ ಸಚಿವ ಸ್ಥಾನ ನೀಡುತ್ತೇನೆ ಎಂದು ಮಾತು ಕೊಟ್ಟಿದ್ದಾರೆ. ಒಂದೂವರೆ ತಿಂಗಳಲ್ಲಿ ಸಚಿವ ಸ್ಥಾನ ನೀಡಲಿದ್ದಾರೆ ಎಂದರು. ಇನ್ನು ಮಾಜಿ ಸಚಿವ ಹೆಚ್.ವಿಶ್ವನಾಥ್ ಅವರ ವಿಚಾರ ಕೋರ್ಟ್ನಲ್ಲಿ ಇದೆ. ಈ ಕಾರಣಕ್ಕೆ ನಾವು ವಿಶ್ವನಾಥ್ ಬಗ್ಗೆ ಮಾತಾಡಲ್ಲ. ಇನ್ನು ಶಾಸಕ ರೇಣುಕಾಚಾರ್ಯ ಅವರ ಬಗ್ಗೆ ಕೂಡ ಗೊತ್ತಿಲ್ಲ ಎಂದು ಹೇಳಿದರು.